ಸರ್ಕಾರಿ ಪಾಲಿಟೆಕ್ನಿಕ್, ಬಾಗೇಪಲ್ಲಿ ಎಂಬುದು ಕರ್ನಾಟಕ ಸರ್ಕಾರವು ನಡೆಸುತ್ತಿರುವ ಏಐಸಿಟಿಇ
ಅನುಮೋದಿತ ಸಂಸ್ಥೆಯಾಗಿದೆ ಮತ್ತು ಬೆಂಗಳೂರಿನ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ
ವ್ಯಾಪ್ತಿಯಲ್ಲಿದೆ. ನಮ್ಮ ಸಂಸ್ಥೆಯು ಇಂಜಿನಿಯರಿಂಗ್ ಶಿಕ್ಷಣದಲ್ಲಿ ಮೂರು ವರ್ಷದ ಡಿಪ್ಲೊಮಾ
ಶಿಕ್ಷಣವನ್ನು ನೀಡುವ ಮೂಲಕ ಬಾಗೇಪಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರಿಗೆ ಸೇವೆ
ಸಲ್ಲಿಸುತ್ತಿದೆ. ಸಂಸ್ಥೆಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅವಶ್ಯಕವಾದ
ಮೂಲಸೌಕರ್ಯಗಳನ್ನು ಮತ್ತು ಉತ್ತಮ ಅರ್ಹತೆ ಪಡೆದ ಸಿಬ್ಬಂದಿ ಗಳನ್ನು ಹೊಂದಿದೆ.
ನಮ್ಮ ಪಾಲಿಟೆಕ್ನಿಕ್ ಪ್ರತಿ ವಿಭಾಗದಲ್ಲಿ 60 ವಿದ್ಯಾರ್ಥಿಗಳ ಅನುಮೋದಿತ ಸಂಖ್ಯೆ ಯೊಂದಿಗೆ ಈ
ಕೆಳಕಂಡ ನಾಲ್ಕು ಔಪಚಾರಿಕ ಡಿಪ್ಲೋಮಾ ವಿಭಾಗಗಳಲ್ಲಿ ಆರು ಸೆಮಿಸ್ಟರಗಳ (ಮೂರು ವರ್ಷ)
ಶಿಕ್ಷಣವನ್ನು ಒದಗಿಸುತ್ತಿದೆ.
ಇದಲ್ಲದೆ, ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಎರಡು ವರ್ಷಗಳ ITI ಯನ್ನು ಪೂರ್ಣಗೊಳಿಸಿದ
ವಿದ್ಯಾರ್ಥಿಗಳಿಗೆ 3 ನೆಯ ಸೆಮಿಸ್ಟರ್ ಗೆ (2 ನೇ ವರ್ಷ) ಲ್ಯಾಟರಲ್ ಪ್ರವೇಶವನ್ನು ನೀಡುತ್ತಾರೆ. ಈ
ಅವಕಾಶ ದಡಿಯಲ್ಲಿ ಅನುಮೋದಿತ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವಿಭಾಗಕ್ಕೆ ಗರಿಷ್ಠ 12
ಸ್ಥಾನಗಳನ್ನು ಹೊಂದಿದೆ.
ನಮ್ಮ ಸಂಸ್ಥೆಯು ಈ ಕೆಳಕಂಡ ಇಂಜಿನಿಯರಿಂಗ್ ವಿಭಾಗಗಳಲ್ಲಿ ಡಿಪ್ಲೊಮಾ ಶಿಕ್ಷಣವನ್ನು
ನೀಡುತ್ತದೆ.
- ಆಟೋಮೊಬೈಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ.
- ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ.
- ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ.
- ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ.